December 17 – 18, 2023 [Digest]

1. ಇತ್ತೀಚೆಗೆ ಸುದ್ದಿಯಲ್ಲಿರುವ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆ (ರೀಜನಲ್ ಆಂಟಿ ಟೆರರಿಸ್ಟ್ ಸ್ಟ್ರಕ್ಚರ್ – RATS), ಯಾವ ಅಂತಾರಾಷ್ಟ್ರೀಯ ಸಂಸ್ಥೆಗೆ ಸಂಬಂಧಿಸಿದೆ?

[A] ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ್ – UN)
[B] ಶಾಂಘೈ ಸಹಕಾರ ಸಂಸ್ಥೆ (ಶಾಂಘಾಯ್ ಕೋ ಆಪರೇಷನ್ ಆರ್ಗನೈಝೇಶನ್ – SCO)
[C] ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಝೇಶನ್ – NATO)
[D] ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಶಿಯನ್ ನೇಷನ್ಸ್- ASEAN)

Show Answer

2. ಇತ್ತೀಚೆಗೆ ಶಿಕ್ಷಣಕ್ಕಾಗಿ ಪ್ರತಿಷ್ಠಿತ ‘ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ’ ಯ ನೈಹೋಲ್ಮ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

[A] ಸವಿತಾ ಲಾಡಗೆ
[B] ಸಂಜೀವ ಪ್ರಸಾದ್
[C] ರಾಜೇಶ್ವರಿ ಶ್ರೀಧರ್
[D] ಪುಷ್ಪಕ್ ಭಟ್ಟಾಚಾರ್ಯ

Show Answer

3. ಪ್ರತಿ ವರ್ಷ ಡಿಸೆಂಬರ್ 16 ರಂದು ವಿಜಯ್ ದಿವಸ್ ಆಚರಿಸಲಾಗುತ್ತದೆ, ಇದು 1971 ರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಮೇಲೆ ಭಾರತೀಯ ಸಶಸ್ತ್ರ ಪಡೆಗಳ ವಿಜಯವನ್ನು ಸ್ಮರಿಸುತ್ತದೆ. ಈ ದಿನ ಪಾಕಿಸ್ತಾನದ ಕಡೆಯಿಂದ ಶರಣಾಗತಿಯ ಪತ್ರಕ್ಕೆ ಸಹಿ ಹಾಕಿದವರು ಯಾರು?

[A] ಜನರಲ್ ಟಿಕ್ಕಾ ಖಾನ್
[B] ಜನರಲ್ ಅಯೂಬ್ ಖಾನ್
[C] ಜನರಲ್ ಯಾಹ್ಯಾ ಖಾನ್
[D] ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ

Show Answer

4. ಸುದ್ದಿಯಾಗಿದ್ದ EKAMRA ಯೋಜನೆ ಯಾವ ರಾಜ್ಯದಲ್ಲಿದೆ?

[A] ಪಶ್ಚಿಮ ಬಂಗಾಳ
[B] ಮಧ್ಯಪ್ರದೇಶ
[C] ಒಡಿಶಾ
[D] ಕರ್ನಾಟಕ

Show Answer

5. ಅರ್ಜೆಂಟೀನಾದ ಹೊಸ ರಾಷ್ಟಪತಿಗಳು ಯಾರು, ಇತ್ತೀಚೆಗೆ ಅರ್ಜೆಂಟೀನಾದ ಪೆಸೊದ 50% ಅಪಮೌಲ್ಯೀಕರಣದಂತಹ / ಡೀ ವ್ಯಾಲ್ಯುಏಷನ್ ನಂತಹ ಕಠಿಣ ಆರ್ಥಿಕ ಕ್ರಮಗಳನ್ನು ಘೋಷಿಸಿದರು?

[A] ಜೇವಿಯರ್ ಮಿಲೀ
[B] ಸೆರ್ಗಿಯೋ ಮಸ್ಸಾ
[C] ಪೆಟ್ರೀಷಿಯಾ ಬುಲ್ರಿಚ್
[D] ಜುವಾನ್ ಶಿಯಾರೆಟ್ಟಿ

Show Answer

Comments

Leave a Reply